Monday 10 January 2011

ನಿನ್ನ ಭಾವೆನೆಗಳ ಮನೆಯ ರೆಂಟ್ ಎಷ್ಟು ಗೆಳತಿ......,

ಶೀಘ್ರದಲ್ಲಿ......,

ನಿನ್ನ ಭಾವೆನೆಗಳ ಮನೆಯ ರೆಂಟ್ ಎಷ್ಟು ಗೆಳತಿ......,


ನಿನ್ನ ಭಾವೆನೆಗಳ ಮನೆಯ ರೆಂಟ್ ಎಷ್ಟು ಗೆಳತಿ......,


ನಿನ್ನ ಭಾವೆನೆಗಳ ಮನೆಯ ರೆಂಟ್ ಎಷ್ಟು ಗೆಳತಿ......,

Sunday 14 November 2010

ಭಾರತಾಂಬೆಯ ದಿಗ್ಭಂಧನ

ಎಂದು ಬಿಡುಗಡೆ ತಾಯಿ ನಿನ್ನಗೆ
ಭ್ರಷ್ಟ ರಾಜಕಾರಿಣಿಗಳ ಕಪಿ ಮುಷ್ಟಿಯಿಂದ
ನಿನ್ನೆದೆಯ ಹಾಲು ಕುಡಿದು ವಿಷವ ಕಕ್ಕುತ್ತಿಹರು
ನಿನ್ನೊಡಲ ಮುಗ್ದ ಕಂದಮ್ಮಗಲ್ಲಿ ಉಳಿಗಾಲ
ಇನಾದ್ರು ಎದ್ದೇಳು ತಾಯಿ
ವೀರಯೋಧರರಿಗೆ ಜನ್ಮವ ನೀಡು
ರಕ್ತ ಬೀಜಾಸುರರ ಸೊಕ್ಕಡಗಿಸು

ಎಲ್ಲಿ ಹೋದಿರಿ ಹೊಸನಾಡ ಕಟ್ಟುವ ಯುವಕರೇ
ಬಡವರ ರಕ್ತ ಹೀರಲು ಕುಂತವ್ರೇ ಭಕಾಸುರರು
ನಿತ್ರಾಣಳಾಗಿಹಳು ಭಾರತಾಂಬೆ
ಎಲ್ಲಿ ಹೋದಿರಿ ಎಂಟೇದೆಯ ಭಂಟ ಯುವಕರೇ
ಕುದ್ದು ಕುದ್ದು ಹಾರಿ ಹೋಯ್ತೆ ಮನದಾಳದಲ್ಲಿ
ಕಣ್ಮರೆಯಾಯ್ತೆ ವೀರಯೋಧರರ ಸಾವಿರ ಸಂಪುಟಗಳ ಚರಿತೆ


ಮುಂದುವರೆಯುವುದು...........,

Thursday 4 November 2010

ನೀತಿ


ಸಾವಿಗಿಂತ ದೊಡ್ಡದು ಕಾಲ............,
ನಮ್ಮೀಬ್ಬರ ಬಾಳಲ್ಲಿ ಅದು ಸುಳ್ಳಾಗಬೇಕು.......,
ನಾನಾಗಲೀ, ನೀನಾಗಲೀ ಸತ್ತಾಗ ಅದು ರುಜುವಾತಾಗಬೇಕು.

"..........."

ಮಹಂತೇಶ್...........


ಬಾಳು.........

ನನ್ನ ಬಾಳಿಗೆ ಎರಡಕಷರ ಸೇರಿಸಿಕೊಂಡಿದ್ದೀನಿ..
ಅದು ನಿನ್ಹೆಸರು..
ನಿನ್ನ ಮನಸ್ಸು....., ಭಾವನೆ.....,
ಕಷ್ಟ ಸುಖ-ದುಃಖಗಳ........,
ಒಡೆಯ ನಾನಾಗಬೇಕು
ನಿನ್ನೊಂದಿಗಿನ ರಸಮಯಗಳನ್ನ
ಸವಿಯಬೇಕು.........,
ಈ ಬಯಕೆಗಳನ್ನ ಈಡೇರಿಸ್ತಿಯಾ

"........."
ಮಹಂತೇಶ್.................


Friday 29 October 2010

ಪ್ರೇಮಿ

ನನ್ನ ಹರೆಯದ ಕಾವು ಹಾರಿ ಹೋಗುವ ಮುನ್ನ
ಬರೆಯ ಬೇಕಿದೆ ಹೊಸದೊಂದು ಪ್ರೀತಿಯ ಕವನ
ನಿನ್ನೊದಿ ಸಮ್ಮತಿಸಬೇಕಿದೆ ಈ ಪ್ರೇಮಿಯನ್ನ
ಇಂದೊಂದೆ ಆಸೆ ಗೆಳತಿ .............

Saturday 23 October 2010

ಪತ್ರ ಪೂರ್ತಿ ಮಾಡ್ಬೇಕು............

ಅವತ್ತು ನೀನು ಸಿಟ್ನಲ್ಲಿ ಮೂತಿನಾ ಸೋಟ್ಟಗೆ ಮಾಡ್ಕೊಂಡು ಹೋಗ್ತಿದೆಯಲ್ಲ ಅಂದು ನಂಗೇ ಬೋ ಇಷ್ಟ ಅಂತಾ ಹೇಳ್ದೇ ಅಷ್ಟೇ ನೀನು ರಪ್ ಅಂತಾ ಕೆನ್ನೆಗೆ ಕೊಟ್ಯಾಲ್ಲ ಆ ಏಟು.ಅಬ್ಬ ಅಬ್ಬ ಇವತ್ತು ಮರ್ತಿಲ್ಲ.ನಿನ್ನ ಏಟಿನಿಂದ ನನ್ನ ಕೆನ್ನೆ ಬುರ್ ಅಂತಾ ಉದೂಕೊಂಡಿತ್ತು,ಅದನ್ನ ಪೋಟೋ ತೆಗೆಸಿಕೊಂಡು ಬಚ್ಚಿಟ್ಟಿದ್ದೀನಿ.ಆಗಿಂದ್ಯಾಗ್ಗೆ ನನ್ನ ಕೆನ್ನೆನೂ ಪೋಟೋವನ್ನು ಮುಟ್ಟಿ ಮುಟ್ಟಿ ನೋಡ್ಕೊಂತ್ತೀನಿ,ಅದೊಂದೆ ಗೆಳತಿ ನಿನ್ನ ನೆನಪು ಅಂತಾ ನನ್ಹತ್ರ ಊಳ್ದಿರೋ ದಾಖಲೆ.ಇದೇಲ್ಲ ಆಗಿ ಇಲ್ಲಿಗೆ ಬರೋ ಬರಿ 2ವರ್ಷ ಆಯ್ತು.ನೀನು ಹಾಗೂ ನಿನ್ನ ನೆನಪು ಅಲ್ಪಸ್ವಲ್ಪ ಮಾಸಿದ್ವು,ಕೇವಲ ಮಲಗುವಾಗ ಮಾತ್ರ ನೆನಪಿಗೆ ಬರ್ತಿದ್ವು.ಆದ್ರೆ ಮೊನ್ನೆ ಮಲ್ಲೇಶ್ವರಂ ಸರ್ಕಲ್ ನಲ್ಲಿ ನೀನು ವೈಟ್ ಅಂಡ್ ವೈಟ್ ಡ್ರಸ್ ಹಾಕೊಂಡು ರಸ್ತೆ ದಾಟುತ್ತಿದ್ದನ್ನು ನೋಡಿದೆ ಅಷ್ಟೇ,ನನ್ನಲ್ಲಿ ನಾನಿಲ್ಲ ಮನದಲ್ಲಿ ನೀ ಎಲ್ಲ..... ನೀ ಇಲ್ಲದೆ ಎನ್ನೇನು ಇಲ್ಲ....... ಪರವಾಗಿಲ್ಲ ನೀನು ಮೊದಲಿಗಿಂತ ಲಕ್ಷಣವಾಗಿದ್ದೀಯ ಸ್ವಲ್ಪ ದಪ್ಪವಾಗಿದ್ದೀಯ.ಹೊಗಲಿ ಬಿಡು ಎರಡು ವರ್ಷ ನಂತ್ರ ನಿನ್ನ ನೋಡಿದೆ. ಅದೇ ಖುಷಿಯಲ್ಲಿ ರಾತ್ರಿಯ.ಲ್ಲ ನನ್ನ ಸ್ನೇಹಿತರಿಗೆ ದೊಡ್ಡ ಕೂಳೆ ಕೊಟ್ಟೆ.ಜೋತೆಗೆ ನಾನು ನಿನ್ನ ಜೊತೆ ಕಳೆದ ಕಾಲೇಜ್ ದಿನಗಳನ್ನ ನೆನಪಿಸಿಕೊಂಡು ಪುಲ್ ಖುಷಿ ಪಟ್ಟೆ.ಅವತ್ತಿನಂದ ಇವತ್ತಿನ ವರೆಗೂ ಅದೇ ಮಲ್ಲೇಶ್ವರಂ ಸರ್ಕಲ್ ನಲ್ಲಿ ೪.೩೦ ಕ್ಕೆ ಸರಿಯಾಗಿ ಕಾಯ್ತಿದ್ದೀನಿ ಆದ್ರೆ ನೀನು ಮಾತ್ರ ನನ್ಗೇ ಸಿಗ್ತಾನೇ ಇಲ್ಲ.ಯಾಕೆಂದ್ರೆ ಅವತ್ತು ನೀನು ಯಾಕೆ ಹೊಡೆದೆ ಅನ್ನೋದು ಮಾತ್ರ ಗೊತ್ತಿಲ್ಲ. ನಾನು ಮಾಡಿದ ತಪ್ಪು ಆದ್ರೂ ಎನು .ನನ್ಗೇ ನಿಜವಾಗಿಲ್ಲೂ ಗೊತ್ತಿಲ್ಲ.ಈ ಎಲ್ಲ ಪ್ರೆಶ್ನೆಗಳಿಗೆ ಉತ್ತರ ನೀನೇ ಕೊಡ್ಬೇಕು .ನಾನು ಲವ್ ಮಾಡ್ತೀನಿ ಅಂದಾಗ ಕೇವಲ ನಕ್ಕು ಮೌನವಾಗಿ ಸಮ್ಮತ್ತಿಸಿದ್ದೆ.ನಂತ್ರ ಎಲ್ಲೆ ಹೋದ್ರು ಜೊತೆಯಲ್ಲಿಯೇ ಹೋಗ್ತಿದ್ವಿ.ಹೀಗಾಗಿ ನೀನು ನನಗೆ ತುಂಬ ಹತ್ತಿರವಾಗಿದೆ.ಇಷ್ಟಿದ್ರು ಅವತ್ತು ಮಾತ್ರ ಯಾವುದೇ ಕಾರಣ ಕೋಡದೆ ನನ್ನ ಮುದ್ದು ಕೆನೆಗೆ ರಪ್ ಅಂತ ಬಡಿದು ಹೋಗಿದ್ದೆ.ದಯವಿಟ್ಟು ಸಿಗು,ನಿನ್ನ ಹತ್ರ ಮಾತಾಡೋದು ಬಹಳ ಇದೇ.ಜೊತೆಗೆ ನೀನು ಹೊಡೆದಿದ್ದಕ್ಕೆ ಕಾರಣ ಗೊತ್ತಾಗಬೇಕಿದೆ.ಅದೆಲ್ಲದಕಿಂತ ಮುಖ್ಯವಾಗಿ ನಾನು ಈ ಪತ್ರನಾ ಪೂರ್ತಿ ಮಾಡ್ಬೇಕಾಗಿದೆ.


ನಿನ್ನ ಕೈ ರುಚಿಯ ಸ್ಮರಣೆಯಲ್ಲಿ
ನಗು ಮುಖದ ಮಹ........

ನಿನ್ನ ಸುಳ್ಳುಗಳಿಗಾಗಿ ಈ ಪತ್ರ



ಅದ್ಯಾಕೋ ಗೊತ್ತಿಲ್ಲ ಇತ್ತಿಚ್ಚಿಗೆ ನಿನ್ನ ಮಾತುಗಳನ್ನ ಕೇಳ್ತಿದ್ರೆ .ತಲೆ ಅಲ್ಲಾಡಿಸೋ ಮೂಕ ಬಸವನಾಗಿ ಹೋಗ್ತೀನಿ. ಅಷ್ಟೊಂದು ಚುರುಕಾಗಿದ್ದ ಹುಡುಗನ್ನ ಅದ್ಹೇಗೆ ಮುಗ್ದನಾಗಿ ಮಾಡಿ ಬಿಟ್ಟೆ.ನಿಜವಾಗ್ಲೂ ನೀನೇ ಚತುರೆ.ಇನ್ನೊಂದು ಸತ್ಯ ಗೊತ್ತಾ.ನೀನು ನನ್ಹತ್ರ ಹೇಳ್ತಿರೋದೆಲ್ಲ ಸುಳ್ಳು ಅಂತಾ ಗೊತ್ತು, ಆದ್ರೂ ನಿನ್ನ ಮಾತ್ತನ್ನ ಮಂತ್ರ ಮುಗ್ದನಾಗಿ ಕೇಳ್ತೀನಿ. ಪರವಾಗಿಲ್ಲ ಕಣೇ ನಿನ್ಗೇ ಶಹಬ್ಬಾಷ್ ಹೇಳ್ಬೇಕು,ಯಾಕೆಂದ್ರೆ ನೀನು ಅದೆಷ್ಟು ಚೆನ್ನಾಗಿ ಸುಳ್ಹೇತ್ತೀಯಾ,ಪ್ಲೀಸ್ ಸುಳ್ಹೇಳೋ ಕಲೆನಾ ನನ್ಗೂ ಕಲ್ಸಿ ಕೊಡೆ.ಆಗ ನಾನು ನಿನ್ಗೇ ನೀನು ನನ್ಗೇ ಇಬ್ಬರು ಒಟ್ಟೊಟ್ಟಿಗೆ ಕಿವಿಗೆ ಹೂ ಇಡೋಣಾ. ಎಷ್ಟು ಚನ್ನಾಗಿದೆ ಅಲ್ವಾ ನನ್ನಾಸೆ.ಅಲ್ಲ ಅವತ್ತು ನೀನು...................... ಅಂತಾ ಹೇಳಿದ ಸುಳ್ಗೇ ನಾನು ಪುಲ್ ಪ್ಲಾಟ್,ಕಣ್ಣೀಗೆ ನಿದ್ರೆ ಇಲ್ದೇ ರೂಮ್ ನಲ್ಲಿ ಒಬ್ಬನೇ ಎದ್ದು ಗಿರಕಿ ಹೊಡೆದಿದ್ದೇನೆ.ನನ್ನ ಪಂಚಪ್ರಾಣವಾದ ಬುಕ್ ಓದೋ ಹವ್ಯಾಸನೇ ಅವತ್ತು ನನ್ಕೈ ಹಿಡಿಲಿಲ್ಲ. ನಿಜವಾಗ್ಲು ನೀನು ನನ್ಗೇ ಕೈಕೊಡೋಲ್ಲ ತಾನೇ. ಈ ಪ್ರೆಶ್ನೇಯೊಂದಕ್ಕೆ ನೀನು ನಿಜವಾದ ಉತ್ತರ ಕೊಡು. ಇದು ಹುಡುಗನ ಜೀವಾ ಕಣೇ



ಅವಲತ್ತುಕೊಂಡ ಹುಡುಗ
ನಿನ್ನ ಹೆಸ್ರು (................)